ಪ್ರಶಸ್ತಿಗೆ ಸಂದ ಗೌರವ
ಇತ್ತೀಚೆಗೆ ಪ್ರಶಸ್ತಿ ಕೂಡಾ ಒಂದು ವಿವಾದಾತ್ಮಕ ವಸ್ತುವಾಗಿದೆ. ಇಲ್ಲಿ ಸಮಸ್ಯೆ ವಿವಾದದ್ದಲ್ಲ; ಪ್ರಶಸ್ತಿಗೆ ಭಾಜನರಾದ ಅರ್ಹರದು. ಅವರ ಪರಿಸ್ಥಿತಿ ಕಷ್ಟಕರ, ಇತ್ತ ಪ್ರಶಸ್ತಿ ಸಂದ ಬಗ್ಗೆ ಹೆಮ್ಮೆ ಪಡುವ ಹಾಗೂ ಇಲ್ಲ, ಸ್ವೀಕರಿಸದೆ ನಿರಾಕರಿಸುವುದೂ ಕಷ್ಟ; ಅದೂ ಕೂಡ ವಿವಾದದ ವಸ್ತುವೇ. ಅದಕ್ಕಿಂತ ಹೆಚ್ಚಿನದಾಗಿ ಪ್ರಶಸ್ತಿ ಸಮಿತಿಗಳೂ ಅಷ್ಟೆ; ಯಾವುದೋ ಒತ್ತಡಕ್ಕೆ ಒಳಗಾಗಿ ಗೌರವವನ್ನು ರಾಮನವಮಿಯ ಪಾನಕ ಪ್ರಸಾದದಂತೆ ಹಂಚುತ್ತವೆ. ಅದಕ್ಕೆ ಸೂಕ್ತ ಉದಾಹರಣೆ ನಮ್ಮ ಸರ್ಕಾರದ ರಾಜ್ಯಪ್ರಶಸ್ತಿ. ಆಗಲೇ ದ್ವಿಶತಕದ ಹತ್ತಿರದವರೆಗೂ ಶಿಫಾರಸು ಮಾಡಿದ ಗರಿಮೆ ಈ ಸಮಿತಿಗೆ ಇದೆ. ಅದೇನೇ ಇರಲಿ, ಈ ಬಾರಿಯ ಪಂಪ ಪ್ರಶಸ್ತಿಯ ಸಮಿತಿಯ ಆಯ್ಕೆ ಪ್ರಶಂಸನೀಯ.
ಸಮಿತಿಯ ಆಯ್ಕೆಯಾದ ಡಾ. ಎಸ್ ಎಲ್ ಭೈರಪ್ಪನವರು ಅರ್ಹ ವ್ಯಕ್ತಿ ಎಂದು ನಾನು ಅಭಿನಂದಿಸುವುದಕ್ಕಿಂತ ಹೆಚ್ಚಾಗಿ ಪ್ರಶಸ್ತಿ ಸಮಿತಿ ಭೈರಪ್ಪನವರನ್ನು ಆಯ್ಕೆ ಮಾಡುವ ಧೈರ್ಯ ತೋರಿಸಿತು ಎಂದು ಸಂತಸಪಡುತ್ತೇನೆ. ವಾಸ್ತವವಾಗಿ ನೋಡಿದರೆ, ಭೈರಪ್ಪನವರು ಈ ಪ್ರಶಸ್ತಿ ಪುರಸ್ಕಾರಗಳನ್ನು ದಾಟಿ ನಡೆದಾಗಿದೆ. ಅವರನ್ನು ಗೌರವಿಸುವುದು ಅಂದರೆ ನಮ್ಮನ್ನು ನಾವು ಗೌರವಿಸಿಕೊಂಡಂತೆ. ಇಷ್ಟಿದ್ದರೂ ನಮ್ಮ ಹಲವಾರು ಪ್ರಶಸ್ತಿ ಸಮಿತಿಗಳು ಈ ಅಂಶವನ್ನು ಗುರುತಿಸುವಲ್ಲಿ ವಿಫಲವಾಗಿವೆ. ಬಹುಶ: ಅವರು ಇನ್ನಾವುದೋ ರಾಜ್ಯದಲ್ಲಿ ಹುಟ್ಟಿ ಅಲ್ಲಿ ಸಾಹಿತ್ಯ ಕೃಷಿ ನಡೆಸಿದ್ದರೆ, ಜ್ಞಾನಪೀಠ ಪ್ರಶಸ್ತಿ ಕೂಡಾ ಅದೆಂದೋ ಅವರ ಪಾಲಾಗಿರುತ್ತಿತ್ತು. ಕನ್ನಡದ ದೌರ್ಭಾಗ್ಯವೋ, ಸೌಭಾಗ್ಯವೋ ಗೊತ್ತಿಲ್ಲ, ಇಲ್ಲಿ ಅರ್ಹರ ಪಟ್ಟಿ ತೀರಾ ಉದ್ದವಿದೆ; ಕಾಯುವ ಆಯುಷ್ಯವನ್ನು ಕಾಲ ಕರುಣಿಸಿದರೆ ಮಾತ್ರ ಪ್ರಶಸ್ತಿ ದೊರಕಲು ಸಾಧ್ಯ.
ನನಗೆ ಭೈರಪ್ಪನವರ ಕಾದಂಬರಿಗಳಲ್ಲಿ ಅತ್ಯಂತ ಇಷ್ಟಕರವಾಗುವ ಅಂಶ ಅವುಗಳ ಹಿಂದಿನ ಅಧ್ಯಯನಶೀಲತೆ. ಅವರ ಕೃತಿಗಳು "ಸಂತೆಯ ಹೊತ್ತಿನ ಮೂರು ಮೊಳ"ಗಳಂತಲ್ಲ. ಅವರ ಪ್ರತಿಯೊಂದು ಕಾದಂಬರಿಯೂ ವಿಶಿಷ್ಟ, ವಿಭಿನ್ನ. ಎಲ್ಲಾ ದೃಷ್ಟಿಯಿಂದಲೂ ಓದುಗನನ್ನು ಪ್ರಭಾವಿಸಬಲ್ಲ ಅವರ ಕೃತಿಗಳು ನನಗೆ ಇಷ್ಟ. ಅಷ್ಟೇ ಅಲ್ಲ, ಅವರ ಒಂದು ಪುಸ್ತಕ ಕೈಗೆತ್ತಿಕೊಂಡರೆ, ಸರಾಗವಾಗಿ ದಿನಗಳನ್ನು ಕಳೆಯಬಹುದು. ನನಗೆ ಇನ್ನೂ ನೆನಪಿದೆ, ಕಾಲೇಜಿನ ದಿನಗಳಲ್ಲಿ ಅವರ "ಧರ್ಮಶ್ರೀ" ಓದಿದ ನಾನು ನನ್ನ ಕ್ರಿಶ್ಚಿಯನ್ ಸಹಪಾಠಿಯನ್ನು ಚರ್ಚೆಗೆ ಎಳೆದಿದ್ದೆ, ಅವಳು ಚರ್ಚಿಗೆ ಎಳೆದಿದ್ದಳು! ಸದ್ಯ ಪಾದ್ರಿಯ ಪ್ರವಚನಕ್ಕಿಂತ ಹೊರತಾಗಿ ಮುಂದೇನೂ ನಡೆಯಲಿಲ್ಲ.
ಭೈರಪ್ಪನವರ ಕೃತಿಗಳನ್ನು ವಿಮರ್ಶೆ ಮಾಡುವ ಮಟ್ಟದ ವಿಮರ್ಶಕ ನಾನಲ್ಲವಾದರೂ, ಒಬ್ಬ ಓದುಗನಾಗಿ, ಅವರಿಗೆ ಸಂದ ಈ ಪ್ರಶಸ್ತಿಯಿಂದ ಪ್ರಶಸ್ತಿಯ ಗೌರವ ಇಮ್ಮಡಿಸಿತು ಎಂದು ನಂಬುತ್ತೇನೆ, ಏನಂತೀರಾ?
- ಕನ್ನಡಿಗ
Use Baraha fonts to read this blog.. http://www.baraha.com
Saturday, January 14, 2006
Wednesday, January 11, 2006
Nature's Choice
ಹರಿಯುವ ನೀರಿನ ದೊಣ್ಣೆ ನಾಯಕರು
ಸುಮಾರು ಹದಿನೈದು ವರುಷಗಳ ಹಿಂದಿನ ಕಥೆ. ನಮ್ಮ ಓಣಿಯಲ್ಲೇ ಸ್ಥಿತಿವಂತರಾಗಿದ್ದ ಕುಟುಂಬವೊಂದು ಹೊಸದಾಗಿ ವಿಡಿಯೊಕಾನ್ ಕಲರ್ ಟಿವಿ ತಂದಿತ್ತು. ಆಗ ಇಡೀ ಊರಿನಲ್ಲೇ ಬೆರಳೆಣಿಕೆಯಷ್ಟು ಟಿವಿಗಳಿದ್ದವಷ್ಟೆ. ಅಂಥಾದರಲ್ಲಿ ನಮ್ಮ ಓಣಿಗೇ ಒಂದು ಟಿವಿ ಬಂದರೆ ಹೇಗಾಗಿರಬೇಡ. ನೆರೆಹೊರೆಯ ಎಲ್ಲ ಕುಟುಂಬಗಳೂ ಸಂಭ್ರಮಿಸಿದ್ದವು, ಅಷ್ಟೇ ಅಲ್ಲ, ಮೊದಲ ಬಾರಿಗೆ ಟಿವಿ ಆನ್ ಮಾಡುವಾಗ ಒಂದು ಪೂಜೆ ಕೂಡ ನೆರವೇರಿತು.
ಜಾಗತೀಕರಣದ ಈ ದಿನಗಳಲ್ಲಿ ಅಂದಿನ ಆ ಆನಂದ, ಸಂಭ್ರಮ ನೆನಸಿಕೊಂಡರೆ ನನಗೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಆದರೆ ಈ ಮೇಲಿನ ಘಟನೆ ೧೯೮೦-೮೫ ರ ನಡುವೆ ನಮ್ಮ ದೇಶದ ಪ್ರತಿ ಊರಲ್ಲೂ ನಡೆದಿದೆ ಎಂದು ನಾನು ನಂಬುತ್ತೇನೆ. ಭಾರತದಂಥ ದೇಶ ನಾಯಕರ ಸಂಕುಚಿತ ಬುದ್ಧಿ, ದೂರದೃಷ್ಟಿಯ ಕೊರತೆಯಿಂದ ಎಷ್ಟೇ ಬಳಲುತ್ತಿರಬಹುದು. ಆದರೆ ತಂತ್ರಜ್ಞಾನದ ಒಂದು ಅಲೆ ಕ್ರಾಂತಿಯನ್ನೇ ಮಾಡಬಲ್ಲದು ಹಾಗೂ ಅದರ ಪರಿಣಾಮ ನಿರಂತರ.
ಕಾಲವನ್ನೊಮ್ಮೆ ಅವಲೋಕಿಸಿದರೆ ವಿಶ್ವದ ಆರ್ಥಿಕತೆಯಲ್ಲಿ ಒಂದು ಚಕ್ರವನ್ನು ಕಾಣಬಹುದು. ಅಂಥ ಹಲವಾರು ಕ್ರಾಂತಿ ಚಕ್ರಗಳನ್ನು ಭಾರತ ಸ್ವಾಗತಿಸಲಿಲ್ಲ. ಅದಕ್ಕೆ ಕಾರಣ ಆಡಳಿತಾರೂಢ ನಮ್ಮ ನಾಯಕರು. ಅವರ ನೇತೃತ್ವದಲ್ಲಿ ಸ್ವಾತಂತ್ರ್ಯಾನಂತರ ಭಾರತ ರಷ್ಯಾವನ್ನು, ಅದರ ಸಮಾಜವಾದವನ್ನು ಹಿಂಬಾಲಿಸಿತು. ಸಹಜವಾಗಿ ಐವತ್ತು ವರುಷಗಳಲ್ಲಿ ನಾವು ಆ ನಿರ್ಧಾರದ ಫಲಶ್ರುತಿಯನ್ನು ಕಾಣಬಹುದು. ದಿವಾಳಿಯೆದ್ದಿರುವ ರಷ್ಯನ್ ಒಕ್ಕೂಟದ ರಾಷ್ಟ್ರಗಳು ಭಾರತದ ಅವಳಿ ತಮ್ಮಂದಿರಂತಿವೆ. ಕಾರಣ ಸ್ಪಷ್ಟ; ಸಮಾನತೆ, ಸಾಮಾಜಿಕ ನ್ಯಾಯ ಇತ್ಯಾದಿಗಳು ಭಾಷಣದ, ಪುಸ್ತಕದ ವಸ್ತುಗಳೇ ಹೊರತು ವಾಸ್ತವದ ಸತ್ಯಗಳಲ್ಲ. ಸಮಾಜವಾದದ ತತ್ವದಂತೆ ಮಾನವ ಮೂಲತ: ಸಂಘಜೀವಿಯಾದರೂ, ಮೂಲ ಪ್ರಕೃತಿಯ ಸಿದ್ಧಾಂತ ಬೇರೆ; ಯೋಗ್ಯತೆ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಆಯ್ಕೆ. ಬಂಡವಾಳಶಾಹಿ ರಾಷ್ಟ್ರಗಳು ಅನುಸರಿಸುವುದು ಅದನ್ನೇ. ಸಹಜವಾಗಿ ಸಮಾಜವಾದದ ತತ್ವ ಸಿದ್ಧಾಂತಗಳು ಅವನತಿ ಹೊಂದಿದರೆ ಬಂಡವಾಳಶಾಹಿಗಳು ಬದುಕಿದರು. ಯಾವುದು ಸರಿ, ಯಾವುದು ತಪ್ಪು ಎನ್ನುವುದನ್ನು ಕಾಲ ನಿರ್ಧರಿಸುತ್ತದೆ, ನಮ್ಮ ರಾಜಕಾರಣಿಗಳು ದೊಣ್ಣೆ ನಾಯಕರಾಗುವ ಅವಶ್ಯಕತೆಯಿಲ್ಲ.
ಭಾರತದಂಥ ದೇಶಕ್ಕೂ ಆಸರೆಯಿತ್ತು. ತೊಂಬತ್ತರ ದಶಕದ ಆದಿಯಲ್ಲಿ, ಪರಿಸ್ಥಿತಿಯ ಕೈವಾಡದಿಂದಾಗಿ ಬದಲಾವಣೆಯ ಕಾಲ ಬಂದಿತ್ತು. ಅಷ್ಟೇ ಅಲ್ಲ, ಆಗ ಬಂದಿದ್ದ ಮಾಹಿತಿ ತಂತ್ರಜ್ಞಾನಕ್ಕೆ ನಮ್ಮ ನೇತಾಗಳ ಅವಶ್ಯಕತೆಯಿರಲಿಲ್ಲ. ಅವರ ಗೃಹಿಕೆಗೆ ಬರುವಷ್ಟರಲ್ಲಿ ಎಲ್ಲ ಮುಗಿದಿತ್ತು. ಅದರ ಪರಿಣಾಮ: ದೇಸೀ ಬ್ಯಾಂಕುಗಳು, ಸರ್ಕಾರಿ ಕಂಪನಿಗಳಲ್ಲಿ ಯಾರೂ ಪರಿಚಿತರಿಲ್ಲದಿದ್ದಲ್ಲಿ ನಿರುದ್ಯೋಗವೇ ಗತಿಯಾಗಿದ್ದ ನಮ್ಮ ಯುವಕರಿಗೆ ಜೀವನ ಮಾರ್ಗ ಸೃಷ್ಟಿಯಾಗಿತ್ತು. ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಾಗಿದ್ದ ನಮ್ಮ ಅಂಬಾಸಡರ್, ಬಜಾಜ್ ಚೇತಕ್ ಗಳ ಅಸಲಿ ಬಂಡವಾಳ ಹೊರಬಿತ್ತು. ಇಂದು ನಾನು ಇದನ್ನೆಲ್ಲ ಬರೆದರೆ ಸಿನಿಕತನ ಅನಿಸಬಹುದು. ನಿಮ್ಮ ಮನೆಯಲ್ಲಿ ಸೀನಿಯರ್ ಚಿಕ್ಕಪ್ಪನೋ, ಅಣ್ಣನೋ ಇದ್ದರೆ ಕೇಳಿ ನೋಡಿ, ತಪ್ಪಿದ್ದರೆ ತಿದ್ದಿ.
ಬದಲಾದ ಕಾಲ: ರಸ್ತೆ ಸರಿಯಿಲ್ಲದಿದ್ದರೆ ಅದು ಅಂತರಾಷ್ಟ್ರೀಯ ಸುದ್ದಿಯಾಗುತ್ತದೆ, ಆಳುವ ಸರ್ಕಾರ ಕಡೆ ಪಕ್ಷ ಸ್ಪಷ್ಟನೆ ನೀಡುತ್ತದೆ. ದಬ್ಬಣ ಚುಚ್ಚಿದರೂ ಸ್ಪಂದಿಸದ ನಮ್ಮ ದಪ್ಪ ಚರ್ಮದ ಸರ್ಕಾರದಿಂದ ಇದು ಸಾಧ್ಯವಾಗಿದ್ದರೆ ಕಾಲಾಯ ತಸ್ಮೈ ನಮ:

Sunday, January 08, 2006
SideStreet Boys
ನೀವು ನನ್ನಂತೆ ಹೊಟ್ಟೆಪಾಡಿಗಾಗಿ ಕೋಡು-ಕುಟ್ಟುವವರಾಗಿದ್ದರೆ(software programmers) ಇಲ್ಲಿನ ಘಟನೆಗಳು ನಿಮ್ಮ ಅನುಭವಕ್ಕೂ ಬಂದಿರಬಹುದು. ನಾನು ಪಶ್ಚಿಮ ದೇಶದ ಪೂರ್ವ ತೀರದಲ್ಲಿ ಐಟಿ ಉದ್ಯೋಗಿಯಾಗಿದ್ದೇನೆ. ಮನೆಗೂ ಆಫೀಸಿಗೂ ಸುಮಾರು ಎರಡು ತಾಸುಗಳ ಪ್ರಯಾಣವಿರುವುದರಿಂದ ಮುಂಜಾನೆ ಸಾಕಷ್ಟು ಬೇಗ ಏಳಬೇಕಾಗುತ್ತದೆ. ಕೋಳಿ ಕೂಗುವ ಮುನ್ನ ಇ-ಕೋಳಿ (alarm clock) ಕೂಗಿಸಿ, ತಯಾರಾಗಿ ಹೊರಟು ಬಸ್ಸು ಹಿಡಿದು ಸಿಟಿ ತಲುಪುತ್ತೇನೆ. ನಂತರ ಸಬ್-ವೇ(ಸಿಟಿಯ ಸಾರಿಗೆ ವ್ಯವಸ್ಥೆ) ಹಿಡಿಯಲು ಸುಮಾರು ೧೦ ನಿಮಿಷ ನಡೆಯಬೇಕಾಗುತ್ತದೆ. ಇಲ್ಲಿ ಬರುತ್ತಿದ್ದಂತೇ ಶುರು ನೋಡಿ, ಸರಸ್ವತಿಯ ಉಪಾಸಕರ ಸಂಗೀತ ಗಂಗೆ.
ಇವರು ಮತ್ತಾರೂ ಅಲ್ಲ, ಪಶ್ಚಿಮ ದೇಶಗಳಲ್ಲಿ ಮರ್ಯಾದೆಯಿಂದ ಬೇಡುವ ಭಿಕ್ಷುಕರು. ಇವರ ಡೀಲ್ ಇಷ್ಟೇ; ನೀವು ಅವರು ಬಾರಿಸುವ ಸಂಗೀತ ಕೇಳಿ ಅವರಿಗೆ ಕಾಸು ಕೊಡಬೇಕು. ಇವರಲ್ಲೂ ಕೂಡಾ ಒಂಥರಾ ಶಿಸ್ತು ಉಂಟು, ಇಬ್ಬರು ವಾದಕರು ಒಂದೇ ಗುಂಪಿನವರಾಗಿರದಿದ್ದರೆ, ಅವರು ಹತ್ತಿರವೇ ನಿಂತು ಸ್ಪರ್ಧಿಸಲಾರರು. ಮರ್ಯಾದೆಯಿಂದ ತಮ್ಮಷ್ಟಕ್ಕೆ ತಾವೇ ದೂರ ನಿಂತು ವ್ಯವಹಾರ ನಡೆಸುತ್ತಾರೆ. ಜೊತೆಗೆ ನಾನು ಗಮನಿಸಿದಂತೆ ಅವರು ಹರಡಿರುವ ಜೋಳಿಗೆಯಲ್ಲಿನ ಕಾಸು ಅವರ ವಾದ್ಯಕ್ಕೆ ಅನುಪಾತದಲ್ಲಿರುತ್ತದೆ. ದೊಡ್ಡ ಹಾಗೂ ಹೆಚ್ಚಿನ ವಾದಕರ ಗುಂಪಿನ ಕಮಾಯಿ ಕೂಡಾ ಹೆಚ್ಚು. ಇಲ್ಲಿನ ವಾದಕರಲ್ಲಿ ಹೆಚ್ಚಿನವರು ಖಾಯಂ ಒಂದೇ ಜಾಗದಲ್ಲಿ ಇರುತ್ತಾರೆ, ಬಹುಶ: ಅವರ ಗಿರಾಕಿಗಳೂ ಖಾಯಂ ಇರಬಹುದೇನೋ.
ನನಗೆ ಸಂಗೀತ ಜ್ಞಾನ ಅಷ್ಟೊಂದು ಇಲ್ಲವಾದರೂ ಕರ್ಕಶ ಮತ್ತು ಸುಶ್ರಾವ್ಯ ಸ್ವರದ ನಡುವಿನ ವ್ಯತ್ಯಾಸ ತಿಳಿಯುತ್ತದೆ. ಆ ಆಧಾರದ ಮೇಲೆ ಹೇಳುವುದಾದರೆ, ಇವರಲ್ಲಿ ಕೆಲವರು ನಿಜಕ್ಕೂ ಒಳ್ಳೆಯ ವಾದಕರು. ಅವರ ಬಗ್ಗೆ ನನಗೆ ಸದಭಿಪ್ರಾಯವುಂಟು. ಇನ್ನು ಉಳಿದವರು ಪಕ್ಕಾ ಮೈಗಳ್ಳರು.
ಪ್ರಾಯಶ: ಇವರದು ಶಾಲಾ ಮಾಸ್ತರರ ಬೆತ್ತದ ರುಚಿ ಕಾಣದ ಸೋಮಾರಿ ದೇಹ; ದಂಡಿಯಾಗಿ ಬೆಳೆದಿದೆ; ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?, ಯಾವುದೇ ಸರ್ಕಾರಿ ಕೋಟಾ ಕೂಡಾ ಲಭ್ಯವಿಲ್ಲದೇ ನಿರುದ್ಯೋಗಿಗಳಾದ ಈ ಸೋಮಾರಿಗಳು ಕೆಲಸ ಹುಡುಕುವ ಬದಲು ಮನೆಯ ಅಟ್ಟದ ಮೇಲೆ ಬಿದ್ದಿದ್ದ ಮುರಿದ ಗಿಟಾರನ್ನೋ, ಕಾಂಗೊವನ್ನೋ (ತಬಲಾದಂಥ ವಾದ್ಯ) ಹುಡುಕಿ ಇಲ್ಲಿ ತಂದು ಬಡಿಯುತ್ತಾರೆ. ಮೊದಲೇ ವಯಸ್ಸಾಗಿ ಪಕ್ಕಾದ ವಾದ್ಯ; ಇವರ ಬಡಿತ ತಾಳಲಾರದೇ ಶ್ರುತಿಯೋ ಅಪಶ್ರುತಿಯೋ ಒಟ್ಟಿನಲ್ಲಿ ಕಿರುಚುತ್ತದೆ. ಕರುಣಾಜನಕವಾದ ಆ ವಾದ್ಯದ ನೋವೇ ಎಷ್ಟೋ ಬಾರಿ ನನ್ನನ್ನು ದಾನಿಯಾಗಲು ಪ್ರೇರೇಪಿಸಿದ್ದುಂಟು.
ಏನೇ ಇದ್ದರೂ ಸದ್ಯ ತಮ್ಮ ಪಾಡಿಗೆ ಸಂಗೀತ ಸಾಧನೆ ನಡೆಸುತ್ತಿರುವ ಇವರು ಟ್ರಾಫಿಕ್ ಸಿಗ್ನಲ್ನಲ್ಲಿ ಕಾಲು ಹಿಡಿಯುವ, ಮನೆ ಮುಂದೆ ಬಂದು ಕಿರುಚುವ ಭಿಕ್ಷುಕರಿಗಿಂತ ಎಷ್ಟೋ ವಾಸಿ, ಏನಂತೀರಾ?

Subscribe to:
Posts (Atom)