ಚಿಟ್ಟಾಣಿಯವರನ್ನು ಬಲ್ಲದ ಯಕ್ಷಗಾನ ಅಭಿಮಾನಿಗಳಿರಲಿಕ್ಕಿಲ್ಲ. ಕನ್ನಡ ಚಲನಚಿತ್ರಕ್ಕೆ ಅಣ್ಣಾವ್ರು ಹೇಗೋ, ಕನ್ನಡ ಸಾಹಿತ್ಯಕ್ಕೆ ಕಾರಂತರು ಹೇಗೋ, ಚಿಟ್ಟಾಣಿಯವರು ಯಕ್ಷಗಾನಕ್ಕೆ ಅಂದರೆ ಅತಿಶಯೋಕ್ತಿಯೇನಲ್ಲ. ಸುತ್ತಲಿನ ಹತ್ತು ಮೈಲಿನ ಫಾಸಲೆಯಲ್ಲಿ ಚಿಟ್ಟಾಣಿಯ ಆಟವಿದ್ದರೆ ತಪ್ಪಿಸಿಕೊಳ್ಳದವರಾಗಿದ್ದು, ಸದ್ಯಕ್ಕೆ ಅಮೇರಿಕಾದಲ್ಲಿ ಅನಿವಾಸಿ ಭಾರತೀಯರಾಗಿರುವ ನನ್ನಂಥ ಅಭಿಮಾನಿಗಳಿಗೆ ಚಿಟ್ಟಾಣಿಯ ಕಾರ್ತವೀರ್ಯನನ್ನು ಪುನ: ನೋಡುವ ಅವಕಾಶ ಸಿಕ್ಕಿದ್ದು ಹಸಿದವನಿಗೆ ಮೃಷ್ಟಾನ್ನ ಭೋಜನ ದೊರೆತಂತಾಗಿತ್ತು.
ಸದ್ಯಕ್ಕೆ ಅಮೇರಿಕಾ ಪ್ರವಾಸದಲ್ಲಿರುವ ಚಿಟ್ಟಾಣಿಯವರನ್ನು ಆಮಂತ್ರಿಸಿ, ಲಭ್ಯವಿದ್ದ ಚಿಕ್ಕ ಕಾಲಾವಕಾಶದಲ್ಲಿ ನ್ಯೂಜೆರ್ಸಿಯ ಚರ್ಚ್ ಒಂದರ ಸಭಾಂಗಣದಲ್ಲಿ ರಂಗ ಸಜ್ಜುಗೊಳಿಸಿ, ಸುತ್ತಲಿನ ಕನ್ನಡಿಗರಿಗೆ ಈ-ಆಮಂತ್ರಣ ಕಳಿಸಿ ನಿರ್ವಾಹಿಸಿದ ನ್ಯೂಜೆರ್ಸಿಯ ಯಕ್ಷಗಾನ ಅಭಿಮಾನಿಗಳು ಒಂದು ಕಳೆಗಟ್ಟಿದ ಆಟಕ್ಕೆ ಪೀಠಿಕೆ ಹಾಕಿದ್ದರು. ಕಥಾಪ್ರಸಂಗ ಯಾವುದೇ ಇದ್ದರೂ ಸರಿ, ಚಿಟ್ಟಾಣಿಯವರ ನವಿಲು ಕುಣಿತವಿಲ್ಲದೇ ಆಟ ಪೂರ್ಣವಾಗುವುದಿಲ್ಲ. ವನವಿಹಾರಕ್ಕೆ ಹೊರಟ ಕಾರ್ತವೀರ್ಯನ "ನವಿಲು ಕುಣಿಯುತಿದೆ ನೋಡಾ.. " ಕುಣಿತಕ್ಕೆ ಬಿದ್ದ ಚಪ್ಪಾಳೆ, ಶಿಳ್ಳೆಗಳು ಗುಂಡಬಾಳದ ಆಟವನ್ನು ನೆನಪಿಸುತ್ತಿದ್ದವು.
ಚಿಟ್ಟಾಣಿಯ ಕಾರ್ತವೀರ್ಯನನ್ನು ನೋಡಿ ಸುಮಾರು ಹದಿನೈದು ವರುಷಗಳೇ ಕಳೆದಿದ್ದವು. ಮೊನ್ನೆಯ ಪ್ರಸಂಗದಲ್ಲಿ, ರಾವಣ-ಕಾರ್ತವೀರ್ಯನ ಸಂಭಾಷಣೆಯ ಸನ್ನಿವೇಶ; ರಾವಣನನ್ನು ಸ್ತ್ರೀಲೋಲ ಎಂದು ಮೂದಲಿಸುತ್ತಾ ಕಾರ್ತವೀರ್ಯನು ಕುಣಿಯುವ ಸನ್ನಿವೇಶವು ಎಪ್ಪತ್ತರ ಹರೆಯದಲ್ಲೂ ಚಿಟ್ಟಾಣಿಯ ಕುಣಿತದ ಉತ್ಸಾಹ ಕುಂದಿಲ್ಲವೆಂಬುದನ್ನು ಸ್ಪಷ್ಟಪಡಿಸಿತ್ತು. ಹರೆಯದ ಹೆಣ್ಣಿನ ನಡಿಗೆ, ಲಾಲಿತ್ಯವನ್ನು ವಿವಿಧ ಭಂಗಿಗಳಲ್ಲಿ ಚಿಟ್ಟಾಣಿಯವರು ತೋರಿಸುತ್ತಿದ್ದರೆ, ರಂಗಮಂದಿರದ ತುಂಬೆಲ್ಲಾ ಚಪ್ಪಾಳೆಯ ಮೊರೆತ. ಯಕ್ಷಗಾನದ ಪ್ರತಿಯೊಂದು ತಾಳಕ್ಕೂ ತನ್ನದೇ ಭಾಷ್ಯ ಬರೆದ ಚಿಟ್ಟಾಣಿಯವರ ಕುಣಿತಕ್ಕೆ ನ್ಯೂಜೆರ್ಸಿಯ ಪ್ರಿನ್ಸ್‌ಟನ್‌ನ ರಂಗಮಂದಿರ ಸಾಕ್ಷಿಯಾಗಿತ್ತು. ತ್ರಿವುಡೆ ತಾಳವೇ ಇರಲಿ ಅಥವಾ ಝಂಪೆ ತಾಳವೇ ಇರಲಿ, ಅದಕ್ಕೆ ಚಿಟ್ಟಾಣಿಯ ಕುಣಿತ, ರಭಸದ ಛಾಪು ಇದ್ದೇ ಇರುತ್ತದೆ. ಮೊನ್ನೆಯ ಚಿಕ್ಕ ಕಾರ್ಯಕ್ರಮದಲ್ಲೂ ಚಿಟ್ಟಾಣಿಯ ಕಲಾ ಬಿಂದಿಗೆಯ ಕೆಲ ಹನಿಗಳನ್ನು ಸವಿಯುವ ಭಾಗ್ಯ ನಮ್ಮದಾಗಿತ್ತು.
ರುಚಿಕಟ್ಟಾದ ಊಟ ತಯಾರಾಗಬೇಕಾದರೆ ಹೇಗೆ ಸಕಲ ಪದಾರ್ಥಗಳು ಅವಶ್ಯಕವೋ ಹಾಗೇ, ಒಂದು ಆಟ ಕಳೆಗಟ್ಟಬೇಕಾದರೆ ಅನುಕೂಲಕರ ವ್ಯವಸ್ಥೆ ಬೇಕು. ಅದಕ್ಕೇ ಮೇಳದ ವ್ಯವಸ್ಥಾಪಕರು ಸಕಲ ಸಿದ್ಧತೆಗಳೊಂದಿಗೆ ಹೊರಡುತ್ತಾರೆ. ದೀಪದ ಬೆಳಕಿನಿಂದ ಜಗಮಗಿಸುವ ಅರ್ಧ ಚಂದ್ರಾಕೃತಿಯ ರಂಗಮಂಟಪದಲ್ಲಿ ಹೊಳೆಯುವ ವೇಷಗಳೊಂದಿಗೆ ಕಲಾವಿದರು ಕಂಗೊಳಿಸುತ್ತಾರೆ; ಆಟವೂ ಕಳೆಗಟ್ಟುತ್ತದೆ. ಆದರೆ ಇಲ್ಲಿ ನಡೆದ ಆಟದಲ್ಲಿ ಆ ಕುಂದುಕೊರತೆ ಬರದಂತೆ ನಿರ್ವಹಿಸಿದ ಕಾರ್ಯಕರ್ತರ ತಂಡವನ್ನು ಅಭಿನಂದಿಸಲೇಬೇಕು.
Use Baraha fonts to read this blog.. http://www.baraha.com
Tuesday, September 12, 2006
Subscribe to:
Post Comments (Atom)
3 comments:
namaskAra,
I felt a bit envious reading your post. I lived a stone's throw away from Priceton for years, and the moment I leave the place, you get to watch this show. Really unfair!!
Thanks any way for your post.
Regards.
Dhanyavaada Sanjaya avare,
Ondu Samshaya, idu Noorentu Sullu Sanjaya avara sullugalalloMdo athava
i missed it :(
Post a Comment