Use Baraha fonts to read this blog.. http://www.baraha.com

Wednesday, April 12, 2006

ಶ್ರದ್ಧಾಂಜಲಿ

ಬಹುಶ: ಡಾ. ರಾಜಕುಮಾರ್ ಅವರ ಚಿತ್ರಗಳನ್ನ ನೋಡದೇ ಇರುವ ಕನ್ನಡಿಗರು ಇರಲಿಕ್ಕಿಲ್ಲ. ನಾನೂ ಅವರ ಎಲ್ಲ ಚಿತ್ರಗಳನ್ನೂ ನೋಡಿದ್ದೇನೆ. ನಾನು ಮೊದಲಿಂದಲೂ ಡಾ. ರಾಜಕುಮಾರ್ ಅಭಿಮಾನಿಯೇನಾಗಿರಲಿಲ್ಲ, ಢಿಶುಂ ಢಿಶುಂ ವಿಷ್ಣುನೇ ಇಷ್ಟ ಆಗ್ತಾ ಇತ್ತು. ಒಮ್ಮೆ ಹೀಗೆ ಪರಭಾಷಾ ಪ್ರೇಮಿ ಸ್ನೇಹಿತರೊಡನೆ ವಾದಕ್ಕೆ ಇಳಿದಾಗ ನಮ್ಮ ಡಾ. ರಾಜಕುಮಾರ್ ಅವರನ್ನ ಸಮರ್ಥಿಸುವ ಪರಿಸ್ಥಿತಿ ಬಂತು. ಕನ್ನಡಿಗನಾಗಿ ಅಷ್ಟೂ ಮಾಡದಿದ್ದರೆ ಹೇಗೆ ಅಂತಾ ವಾದಸರಣಿ ಮಂಡಿಸುವಾಗ, ಒಂದು ಗೆಲ್ಲೋ ಪಾಯಿಂಟ್ ಸಿಕ್ತು. ಇಡೀ ಭಾರತದ (ಬಹುಶ: ಜಗತ್ತಿನ) ಚಲನಚಿತ್ರದ ಇತಿಹಾಸದಲ್ಲಿ ತನ್ನ ನಟನೆಗೆ ಸ್ವತ: ಹಾಡಬಲ್ಲ ಸಾಮರ್ಥ್ಯವಿರುವ ನಟ ನಮ್ಮ ಅಣ್ಣಾವ್ರು ಮಾತ್ರ. ಇದೊಂದೇ ಪಾಯಿಂಟ್ ಸಾಕಾಯ್ತು ನನ್ನ ವಾದ ಗೆಲ್ಲಲು.
ಆವತ್ತಿಂದ ನಾನು ಅವರ ಚಿತ್ರಗಳನ್ನು ಸೀರಿಯಸ್ ಆಗೇ ನೋಡಕ್ಕೆ ಶುರು ಮಾಡಿದೆ. ಅವರ ಥರಾ ಪಾತ್ರಪೋಷಣೆ ಮಾಡುವ ನಟರು ತುಂಬಾ ಕಮ್ಮಿ. "ದಾರಿ ತಪ್ಪಿದ ಮಗ"ದ ಪ್ರೊಫ಼ೆಸರ್ ಪಾತ್ರ ನೋಡಿದವರು ಡಾ. ರಾಜಕುಮಾರ್ ಬರೀ ಮೂರನೇ ತರಗತಿಯವರೆಗೆ ಓದಿದವರು ಅಂತಾ ಊಹಿಸುವುದು ಕಷ್ಟ. ಇದು ಬರೀ ಒಂದು ಉದಾಹರಣೆ ಅಷ್ಟೇ. ಅಂಥ ದೈವದತ್ತವಾದ ಶಾರೀರ, ಅದಕ್ಕೆ ತಕ್ಕ ಕಂಠ, ಸಮನಾದ ಪ್ರತಿಭೆ ಹೀಗೆ ನಟನಿಗೆ ಅವಶ್ಯಕವಾದ ಎಲ್ಲ ಅಂಶಗಳನ್ನೂ ಮೇಳೈಸಿಕೊಂಡು ಜನಿಸಿದ ಪ್ರತಿಭೆ ಇಂದು ನಮ್ಮಿಂದ ದೂರವಾಗಿದೆ. ಇಂಥ ಒಬ್ಬ ನಟ ಕನ್ನಡ ಚಲನಚಿತ್ರರಂಗಕ್ಕೆ ಇನ್ನೊಮ್ಮೆ ಸಿಗುವರೋ ಇಲ್ಲವೋ ಗೊತ್ತಿಲ್ಲ. ಸದ್ಯದ ಪ್ರತಿಭೆಗಳನ್ನು ನೋಡಿದರೆ ಆ ಭರವಸೆ ಹುಟ್ಟುವುದು ಕಷ್ಟ. ಅಗಲಿದ ಮೇರುನಟನಿಗೆ ಭಾವಪೂರ್ವಕ ಶ್ರದ್ಧಾಂಜಲಿ.

- ಕನ್ನಡಿಗ

3 comments:

Sarathy said...

ಚಿತ್ರರಂಗ ಪ್ರವೇಶಿಸುವ ಮುನ್ನ 25 ವರ್ಷಗಳ ಕಾಲ ರಂಗಭೂಮಿ ಗರಡಿಯಲ್ಲಿ ಪಳಗಿದ್ದ ಅಣ್ಣಾವ್ರ ನಟನೆ ಬಗ್ಗೆ ಎರಡು ಮಾತಿಲ್ಲ. ಶಾಸ್ತ್ರೀಯವಾಗಿಯೂ ಸಂಗೀತಾಭ್ಯಾಸ ನಡೆಸಿದ್ದ ಅವರು ಚಿತ್ರರಂಗದಲ್ಲಿ ತಮ್ಮ ಮೊದಲ ಹಾಡು ದಾಖಲಿಸಲು ಅಷ್ಟು ವರ್ಷ ತೆಗೆದುಕೊಂಡಿದ್ದು ಅವರ ನಿಸ್ವಾರ್ಥ, ಸಹನೆಗೆ ಕೈಗನ್ನಡಿಯಾಗಿದೆ. ಅಂತಹ ವ್ಯಕ್ತಿತ್ವ ಭಾರಿ ಅಪರೂಪ...

Satish said...

What about Kishore Kumar, didn't he act and sing for himself?

I disagree with 'jagattinallE', because I have seen many musicals where the actor/actress sings for him/herself.

BELLUR RAMAKRISHNA said...

dear nimmava naanu,
kishore kumar was an actor who was known more for comedy roles. he tried his hand at every aspect of film-making: acting, singing, production, direction, music direction....
he has not done too many variety of roles like ANNAVRU.
THEREFORE, YES, JAGATTHINALLI ANNAVRIGE ANNAVRE SAATI!